Mangalam


ಕಾಶೀಮಠ ಸಂಸ್ಥಾನ ವಾರಣಾಸಿ
ಯುನಿಟ್ : ಕೋಟ ಶ್ರೀ ಕಾಶೀಮಠ, ಕೋಟ

 

ಭೈರವಿ ಹಾಡುಗಳು
ದಾರಿ ಯಾವುದಯ್ಯಾ, ವೈಕುಂಠಕ್ಕೆ
ದಾರಿ ತೋರಿಸಯ್ಯ ||
ಬಲುಭವದನುಭವದಿ | ಕತ್ತಲೆಯೊಳು
ಬಲು ಅಂಜುತೆ ನಡುಗಿ |
ಬಳಲುತ ತಿರುಗಿದೆ ದಾರಿಯ ಕಾಣದೇ
ಹೊಳೆವಂಥ ದಾರಿಯ ತೋರೋ ನಾರಾಯಣ ||1||
ಪಾಪ ಪೂರ್ವದಲ್ಲಿ ಮಾಡಿದುದಕೆ
ಲೇಪವಾಗಿದೆ ಕರ್ಮ |
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ
ಶ್ರೀಪತಿ ಸಲಹೆನ್ನ ಭೂಪನಾರಾಯಣ ||2||
ಇನ್ನು ಜೀವಿಸಲಾರೆ ಭೂಮಿಯ ಮೇಲೆ
ನಿನ್ನ ದಾಸನಾದೆ |
ಪನ್ನಗಶಯನ ಶ್ರೀ ಪುರಂದರವಿಠಲ
ಇನ್ನು ಪುಟ್ಟಿಸದಿರೋ ಎನ್ನ ನಾರಾಯಣ ||3||
*****


(ಭಜನಾ ಸಪ್ತಾಹದ ಮಂಗಲ - 1)
ಎಂದೆಂದೂ ನಿನ್ನ ಪಾದವೇ ಗತಿ ಎನಗೇ
ದೇವಾ| ಗೋವಿಂದಾ ಬಾರಯ್ಯಾ
ಎನ್ನ ಹೃದಯ ಮಂದಿರಕೇ | ದೇವಾ
ಗೋಪಾಲಾ ಬಾರಯ್ಯ
ಎನ್ನ ಹೃದಯ ಮಂದಿರಕೇ ||
ಹಿಂದೆ ನಾ ಬಹುಭಾರಗಳಿಂದ ಬಂದೆ
ಇದರಿಂದ ಗೆಲಿದು ಹೋಗುವ ಕಣ್ಣಮುಂದೆ
ತುದಿಮೊದಲಿಲ್ಲದ ಪ್ರಾಣಿ ನಾ ನೊಂದೆ
ಪದುಮನಾಭ ರಕ್ಷಣೆ ಮಾಡೋ ತಂದೆ ||1||
ಹೆಣ್ಣು ಹೊನ್ನು ಮಣ್ಣಿನಾಸೆಗೆ ಬಿದ್ದು
ಪುಣ್ಯವೆಂಬುದ ನಾ ತಿಳಿಯದೇ ಇದ್ದು
ಅನ್ಯಾಯವಾಯಿತು ಅದಕೇನು ಮದ್ದು
ನಿನ್ನಯ ಧ್ಯಾನವು ಹೃದಯದೊಳಿದ್ದು ||2||
ಹಿಂದೆ ನಾ ಮಾಡಿದ ಪಾಪವ ಕಳೆದೂ
ಇಂದೆನ್ನ ಜನ್ಮ ಸಾಫಲ್ಯವೆಂದೂ
ತಂದೆ ಶ್ರೀ ಪುರಂದರ ವಿಠಲನ ನೆನೆದೂ
ಎಂದೆಂದಿಗೂ ಸುಖ ಆನಂದ ಪಡೆದೂ ||3||
*****


ಧೂಪಾರತಿ
ಧೂಪಾರತಿಯ ನೋಡುವ ಬನ್ನಿರೈ |
ನಮ್ಮ ಗೋಪಾಲಕೃಷ್ಣ ದೇವರ ಪೂಜೆಯಾ ||ಪ||
ಅಗರು ಚಂದನ ಧೂಪ ಗುಗ್ಗುಳ ಸಾಂಬ್ರಾಣಿ |
ಘಮಘಮಿಸುವ ಧೂಪಾರತಿಯೂ |
ಖಗವಾಹನನ ನಗೆಮೊಗದರಸನ |
ಸೊಗಸಿನ ಬಗೆ ಬಗೆ ಆರತಿಯಾ ||1||
ಭೇರಿ ತಮ್ಮಟೆ ತಾಳ ಮೃದಂಗ ಜಾಗಟೆ |
ನಾನಾಪರಿಯ ವಾದ್ಯ ಘೋಷಂಗಳೂ |
ತೋರುವ ಧವಳ ಶಂಖ ತಾಳ ನಾದಂಗಳಿಂದ |
ಮಾಧವ ಕೃಷ್ಣ ದೇವರ ಪೂಜೆಯಾ ||2||
ಪರತರ ಪರತತ್ವ ಪರಮಪಾವನಗೆ |
ಪರಮಮಂಗಳ ಶುಭದಾಯಕಗೆ |
ಪರಿಪೂರ್ಣ ಪರಬ್ರಹ್ಮ ಇಂದು ಶ್ರೀ ರಂಗಗೇ |
ಪುರಂದರ ವಿಠಲ ದೇವರ ಪೂಜೆಯಾ ||3||
*****


ಏಕಾರತಿ
ಏಕಾರತಿಯ ನೋಡುವ ಬನ್ನಿರೈ |
ನಮ್ಮ ಲೋಕನಾಥನ ಸಿರಿ ಪಾದಕ್ಕೆ ಬೆಳಗುವ ||ಪ||
ಹರುಷದಿಂದಲಿ ಏಕಾರತಿ ಬೆಳಗಲು
ನರಕದಿಂದುದ್ಧಾರ ಮಾಡುವನು
ಪರಮಭಕುತಿಯಿಂದ ಬೆಳಗುವ ನರರನ್ನು
ಹರಿ ತನ್ನ ಉದರದೊಳಿರಿಸುವನು ||1||
ತುಪ್ಪದೊಳ್ ಬೆರೆಸಿದ ಮೂರು ಬತ್ತಿಯನ್ನಿಟ್ಟು
ಒಪ್ಪುವ ದೀಪಕ್ಕೆ ದೀಪ ಹಚ್ಚಿ
ತಪ್ಪದೇ ಸಕಲ ಪಾಪಂಗಳ ಕಳೆಯುವ
ಅಪ್ಪಾ ವಿಠಲನ ಪಾದಕ್ಕೆ ಬೆಳಗುವ ||2||
ಅನ್ಯ ಚಿಂತೆಯ ಮಾಡದನ್ಯರ ಭಜಿಸದೇ
ಅನ್ಯನ್ಯ ದೇವರ ಸ್ಮರಿಸದೆಲೆ
ಅನನ್ಯನಾಗಿ ಶ್ರೀ ಪುರಂದರ ವಿಠಲನ
ಘನ್ನ ನಾಮಂಗಳ ಧ್ಯಾನಿಸುತಾ ಇನ್ನು ||3||
*****


ರಾಧೇ ಗೋವಿಂದ ಭಜೋ ರಾಧೇ ಗೋಪಾಲ್ ||
ರಾಧಾಕೃಷ್ಣ ಜಯ ಕುಂಜವಿಹಾರೀ
ಮುರಲೀಧರ ಗೋವರ್ಧನಧಾರೀ
ಮುರಲೀಧರ ಪೀತಾಂಬರಧಾರೀ ||1||
ರಾಧಾಕೃಷ್ಣ ಜಯ ಕುಂಜವಿಲಾಸಾ
ಗೋಪೀಮಾನಸ ರಾಜಹಂಸಾ ||2||
*****


ಆರತಿ-ರಾಮ
(ಭಜನಾ ಸಪ್ತಾಹದ ಮಂಗಲ - 2)
ಜಯ ಜಯ ಆರತ ರಾಮ ತುಮ್ಹಾರೆ ||
ಪ್ರಾಣನಾಥ ರಘುನಾಥ ಮುರಾರೇ ||
ಶುಕನಾರದ ಮುನಿ ಮಂಗಲ ಗಾವೇ
ಭರತ ಶತ್ರುಘನ ಚಮರ ಢುಲಾವೇ ||1||
ಚರನ ಕಮಲ ಪರ ರಹಿಯೇ ಸೀತಾ
ಮಂಗಲ ಗಾವೇ ಸಖಿಯ ಸಮೇತಾ ||2||
ಛತ್ರ ಗ್ರಹೇ ಕರ ಲಛುಮನ ಭ್ರಾತಾ
ಆರತ ಕರತ ಹೈ ಕೌಸಲ್ಯ ಮಾತಾ ||3||
ಸಮ್ಮುಖ ಬೈಠೋ ಹನುಮಾ ಬೀರಾ
ಕೇವಲ ಹರಿಗುಣ ಗಾವೇ ಕಬೀರಾ ||4||
*****


ಆರತಿ - ಶ್ರೀ ಕೃಷ್ಣ ದೇವರು
(ಸೋಮವಾರ)
ಇಂದೀವರಾಕ್ಷಗೆ ಇಭರಾಜವರದಗ
ೆ ಇಂದಿರಾರಮಣ ಗೋವಿಂದ ಹರಿಗೆ |
ನಂದನ ಕಂದನಿಗೆ ನವನೀತ ಚೋರನಿಗೆ
ವೃಂದಾರಕೇಂದ್ರಗೆ ಶ್ರೀಕೃಷ್ಣಗೇ ||
ಜಯಮಂಗಲಂ ನಿತ್ಯ ಶುಭ ಮಂಗಲಂ ||
ಕ್ಷೀರಾಬ್ಧಿವಾಸಗೇ ಕ್ಷಿತಿಜನ ಪಾಲಗೆ
ಮಾರನ್ನ ಪಡೆದ ಮಂಗಳ ಮೂರ್ತಿಗೆ |
ಚಾರುಚರಣಗಳಿಂದ ಚೆಲುವೆ ಗಂಗೆಯ ಪಡೆದ
ಕಾರುಣ್ಯ ಮೂರ್ತಿಗೆ ಕೌಸ್ತುಭಧರಗೇ ||ಜಯಮಂಗಲಂ||
ವ್ಯಾಸಾವತಾರಗೆ ವೇದ ಉದ್ಧಾರಗೇ
ವಾಸಿತಾನಂತ ಪದ ಸಕಲೇಶಗೇ |
ವಾಸುದೇವ ಮೂರ್ತಿ ವೈಕುಂಠ ನಿಲಯಗೇ
ದಾಸನಾ ಕಾಯ್ದ ರುಕ್ಮಿಣಿ ರಮಣಗೇ ||ಜಯ||
*****


ಆರತಿ-ದೇವಿ
(ಮಂಗಳವಾರ /ಶುಕ್ರವಾರ)
ಜಯಮಂಗಲ ಜಯ ಮಂಗಲ
ಜಯ ಮಂಗಲ ದಾಯೇ |
ಕುಲದೇವಿ ಶಾಂತಾ ದುರ್ಗಾಂಬೇ ಮಹಾಮಾಯೇ
ಕುಲದೇವಿ ಶಾಂತೇರಿ ಕಾಮಾಕ್ಷಿ ಮಹಾಮಾಯೇ ||
ಸಲಹೇ ಸರ್ವೇಶ್ವರಿ ಸಂಪದವಿತ್ತು ಕಾಯೇ
ವಲಿದೀಗ ಬೇಗ ರಕ್ಷಿಪುದೆಮ್ಮ ತಾಯೇ ||
ಬಡತನ ಬೆಂಬೊತ್ತಿ ಬರುತಿದೆ ಕಂಡು
ಕಡು ಭಯದಲ್ಲಿ ನಿನ್ನ ಸ್ಮರಿಪೆ ಮುಕ್ಕೊಂಡು
ಪೊಡವೀಶ ವಾಸುಕಿಗಸದಳವೆಂದು
ಪೊಡವೀಶೆ ಬೇಗ ರಕ್ಷಿಪುದೆಮಗಿಂದು ||
ದಂಡೆತ್ತಿ ಬಂದ ದಾನವರೊಡಗೂಡಿ
ಹಿಂಡಾಗಿ ಬರಲು ಹಸ್ತದಿ ಖಡ್ಗ ಹೂಡಿ
ಚಂಡ ಮುಂಡಾದ್ಯರ ಶಿರವ ಚೆಂಡಾಡಿ
ಚಂಡಿ ಚಾಮುಂಡಿ ಎಂದೆನಿಸಿ ಕೊಂಡಾಡಿ ||
ಮಧುಕೈಟಭರ ಮರ್ದಿಸಿ ಮತ್ತಾಚರ್ಮವನು
ಚತುರಾರ್ನವ ಮಾಡಿ ರಚಿಸಿದೆ ಭೂಲೋಕವನು
ಮುದದಿಂದ ಮಹಿಷದಾನವನ ಮರ್ದಿಸಿದೆ
ಇದಿರಾದ ಧೂಮ್ರಲೋಚನನ ಛೇದಿಸಿದೆ ||
ರಕ್ತ ಬೀಜರು ಪುಟ್ಟಿ ದೈತ್ಯರು ಮೆರೆಯೆ
ಯುಕ್ತಿಯಿಂದವರ ನಾಲಿಗೆಯಿಂದ ತರಿಯೇ
ರಕ್ತೇಶ್ವರಿಯೆಂಬ ನಾಮದಿ ಮೆರೆಯೇ
ಮುಕ್ತಿದಾಯಕಿ ನಿನ್ನ ಭಕ್ತರ ಪೆÇರೆಯೇ ||
ಶುಂಭ ನಿಶುಂಭ ಮರ್ದಿನಿ ಸರ್ವಭೂಷೇ
ಶಾಂಭವಿ ನರಶಾಂಭವಿ ಭಕ್ತ ಪೋಷೇ
ಕುಂಭಿನಿಗಧಿಕ ಕೌಮಾಪುರ ವಾಸೇ
ನಂಬಿದೆ ನಿನ್ನ ಪದ್ಮಾಂಬೇ ಜಗದೀಶೇ ||
*****


ಆರತಿ - ರಾಮಚಂದ್ರ
(ಬುಧವಾರ)
ದಶರಥಸುತ ರಘುವೀರನಿಗೆ
ಪಶುಪತಿ ಮಾನಸಂತೋಷನಿಗೇ |
ಕೌಸಲ್ಯಾದೇವಿಗೆ ಸುತನಾಗಿ ಜನಿಸಿದ
ಅಸಮಶೂರ ಭವ ತಾರಕಗೇ ||ಮಂಗಳಂ ||
ಜಾನಕಿರಮಣ ಪರಾತ್ಮರಗೆ
ಸನಕಾದಿ ಮುನಿ ವಂದಿತ ಪದಗೇ |
ಭಾನುಕೋಟಿ ತೇಜ ಸ್ವಯಂಪ್ರಕಾಶಗೇ
ಚಿನುಮಯ ಮೂರ್ತಿ ನಾರಾಯಣಗೆ ||ಮಂಗಲಂ||
ಅಂಜನಿಸುತ ಪರಿಸೇವಿತಗೆ
ಕಂಜದಳಾಕ್ಷ ಶಂಕರಪ್ರಿಯಗೆ
ಭಂಜಿಸಿ ವಾಲಿಯ ಸುಗ್ರೀವನ ಸಲಹಿದ
ರಂಜಿಪ ಕೋದಂಡ ಹಸ್ತನಿಗೆ ||ಮಂಗಲಂ||
ಇಂದಿರೇಶ ಮುಕುಂದನಿಗೆ
ಸುಂದರಾಂಗ ವಾನರಪ್ರಿಯಗೆ
ಕದನದಲ್ಲಿ ದಶಶಿರನ ವಧಿಸಿ
ಸುರವೃಂದದ ಬಂಧನ ಬಿಡಿಸಿದಗೆ ||ಮಂಗಲಂ||
ಶರಣಾಗತ ಪರಿಪಾಲಕಗೆ
ಚಾರುಮಹಿಮ ಶ್ರೀ ರಾಮನಿಗೆ
ಧರೆಯೊಳು ಮಲ್ಲಿನಾಥ ಪುರದಿ ಮೆರೆಯುವಂಥ
ಉರಗ ಮರ್ದನ ಶ್ರೀ ಕೃಷ್ಣನಿಗೆ ||ಮಂಗಲಂ||
*****


ಆರತಿ
(ಗುರುವಾರ)
ಅಕ್ರೂರಗೊಲಿದ ತ್ರಿವಿಕ್ರಮಗೆ | ನಕ್ರನ ಗೆಲಿದ ಪರಾಕ್ರಮಿಗೆ |
ಶಕ್ರನ ಗರ್ವಪಹಾರವ ಮಾಡಿದ | ಶುಕ್ರನ ಶಿಷ್ಯನ ಗೆಲಿದವಗೆ ||
ಮಂಗಳಂ ಜಯ ಶುಭ ಮಂಗಳಂ |
ನಿತ್ಯ ಜಯ ಮಂಗಳಂ ನಿತ್ಯ ಶುಭ ಮಂಗಳಂ ||
ಗಂಗೆಯ ಪಡೆದ ಶ್ರೀ ರಂಗನಿಗೆ | ರಂಗು ಮಾಣಿಕ್ಯದ ಉಂಗುರದವಗೆ |
ಭೃಂಗಕುಂತಳೆಯರ ವ್ರತವನು ಕೆಡಿಸಿದ |
ಅಂಗಜನಯ್ಯ ಶುಭಾಂಗನಿಗೆ ||ಮಂಗಳಂ.....||
ಧರೆಯೊಳಧಿಕ ವೇಂಕಟಾಚಲಗೆ |
ಸ್ಥಿರವಾಗಿ ನೆಲೆಸಿಹ ಪುಷ್ಕರಣಿಯೊಳಗೆ |
ಪರತರ ತತ್ವ ಶ್ರೀ ಪುರಂದರ ವಿಠಲಗೆ
ವರದ ನಮ್ಮ ಶ್ರೀನಿವಾಸನಿಗೆ ||ಮಂಗಳಂ.....||
*****


ಆರತಿ - (ಶನಿವಾರ)
(ಭಜನಾ ಸಪ್ತಾಹದ ಮಂಗಲ - 3)
ಮಂಗಲಂ ಮಂಗಲಂ ವೆಂಕಟೇಶ್ವರಾ
ಮಂಗಲಂ ವೇಂಕಟೇಶ್ವರಾ
ಮಂಗಲಂ ವೇಂಕಟೇಶ್ವರಾ ||ಮಂಗಲಂ||
ಶ್ರೀ ವ್ಯಾಸರಘುಪತಿ ನರಸಿಂಹಾಕ
ಕಾಶೀಮಠಾಚೆ ಉಪಾಸ್ಯದೇವಾಕ
ಶ್ರೀ ವೇಂಕಟಾಗಿರಿ ಶ್ರೀನಿವಾಸಾಕ
ಮಂಗಲಂ ಶ್ರೀ ನಿತ್ಯ ವೇಂಕಟೇಶ್ವರಾಕ ||ಮಂಗಲಂ||
ಮಂಗಲಂ ಪರತತ್ವ ಪುರುಷೋತ್ತಮಾಂಕ
ಮಂಗಲಂ ಮಹಾಲಕ್ಷ್ಮೀ ಬ್ರಹ್ಮವಾಯೂಂಕ
ಮಂಗಲಂ ಸರಸ್ವತಿ ಭಾರತೀ ದೇವೀಂಕ
ಮಂಗಲಂ ಗರುಡ ಶೇಷ ರುದ್ರಾದಿಕಾಂಕ ||ಮಂಗಲಂ||
ಮಂಗಲಂ ಸೌಪರ್ಣಿ ವಾರುಣಿ ದೇವಿಂಕ
ಮಂಗಲಂ ಶ್ರೀ ಗೌರಿ ಗಣಪತೀಂಕ
ಮಂಗಲಂ ಸರ್ವೈ ಇಂದ್ರಾದಿ ದೇವಾಂಕ
ಮಂಗಲಂ ಸರ್ವೈ ನವಗ್ರಹಾಂಕ ||ಮಂಗಲಂ||
ಮಂಗಲಂ ಸರ್ವೈ ವಿಷ್ಣುಭಕ್ತಾಂಕ
ಮಂಗಲಂ ಮಧ್ವಾದಿ ಯತಿ ವರ್ಯಾಂಕ
ಕಾಶೀಮಠಾಂಚೆ ಸರ್ವೈ ಗುರುವರ್ಯಾಂಕ
ಶ್ರೀ ಸುಕೃತೀಂದ್ರಾಗೆಲೆ ಪದಕಮಲಾಂಕ ||ಮಂಗಲಂ||
ಶ್ರೀ ಸುಧೀಂದ್ರತೀರ್ಥ ಗುರುವರ್ಯಾಂಕ
ಶ್ರೀ ಸಂಯಮೀಂದ್ರ ತೀರ್ಥ ಗುರುವರ್ಯಾಂಕ
ಗೌಡ ಸಾರಸ್ವತ ಬ್ರಹ್ಮ ವೃಂದಾಕ
ಮಂಗಲಂ ಸರ್ವೈ ಸಾಧು ಸಜ್ಜನಾಂಕ
ಸರ್ವಾಂತರ್ಯಾಮಿ ಶ್ರೀ ನರಸಿಂಹಾಕ ||ಮಂಗಲಂ||
ಜ್ಯೋ ನಿತ್ಯ ತುಗೆಲೆ ಮಂಗಲಂ ಮ್ಹಣ್ತಾತಿ
ಜ್ಯೋ ನಿತ್ಯ ಭಕ್ತೀನ ಭಜನ ಕರ್ತಾತಿ
ಜ್ಯೋ ನಿತ್ಯ ಸೇವೇಂತು ಭಾಗ ಘೆತ್ತಾಂತ
ಿ ತೇಂ ಸರ್ವೈ ಸರ್ವೈಷ್ಟಾರ್ಥ ಸಿದ್ಧಿ ಪಾವ್ತಾಂತಿ ||ಮಂಗಲಂ||
*****


ಆರತಿ
(ಆದಿತ್ಯವಾರ)
ಚಲಿಸುವ ಜಲದಲಿ ಮತ್ಸ್ಯನಿಗೆ
ಗಿರಿಯ ಬೆನ್ನಲಿ ಪೆÇತ್ತ ಕೂರ್ಮನಿಗೇ
ಧರೆಯನುದ್ಧರಿಸಿದ ವರಾಹಾವತಾರಗೇ
ತರಳನ ಕಾಯ್ದ ಶ್ರೀ ನರಸಿಂಹನಿಗೇ ||ಮಂಗಲಂ||
ಭೂಮಿಯ ದಾನವ ಬೇಡಿದಗೆ
ಆ ಮಹಾಕ್ಷತ್ರಿಯರ ಗೆಲಿದವಗೇ |
ರಾಮಚಂದ್ರ ದಶರಥ ಸುತನಿಗೆ
ಸತ್ಯಭಾಮೆಯರರಸ ಗೋಪಾಲಕೃಷ್ಣಗೆ ||ಮಂಗಲಂ||
ಬೆತ್ತಲೆ ನಿಂತಿಹ ಬೌದ್ಧನಿಗ
ಉತ್ತಮ ಹಯವೇರಿದ ಕಲ್ಕ್ಯಗೆ
ಹತ್ತವತಾರದಿ ಭಕ್ತರ ಸಲಹಿದ
ಕರ್ತು ಶ್ರೀ ಪುರಂದರ ವಿಠಲನಿಗೆ ||ಮಂಗಲಂ||
*****


ಶ್ರೀ ವ್ಯಾಸ ರಘುಪತೀಕ ದಾಕ್ಕೊಯಾ ಆರತಿ
ದಾಸ ಆಮ್ಹಿ ದೇವಾ ದೀ ಹರಿ ಪದರತೀ ||
ಜಯ ಜಯಕಾರು ಹೋ ಪರಾಶರಪುತ್ರಾಕ
ಭಯ ನಾ ಕರೀ ಆಮ್ಕಾ ದೇವಾ ರಾಕ |
ಜ್ಞಾನದಾನ ಕರೀ ದೀ ಆಮ್ಕಾ ಸನ್ಮತೀ
ವ್ಯಾಸ ರಘುಪತೀಕ ದಾಕ್ಕಯಾ ಆರತೀ ||
ಜಯ ಜಯ ಮ್ಹಣಾ ಹೇ ರಘುರಾಮಾಕ
ನಯನ ಮನೋಹರ ಮಂಗಲಧಾಮಾಕ |
ಅಭಯದಾನ ಕರೀ ರಾಮಸೀತಾಪತಿ
ವ್ಯಾಸರಘುಪತೀಕ ದಾಕ್ಕಯಾ ಆರತೀ ||
*****


ಮಾಗಣೀ
(ಭಜನಾ ಸಪ್ತಾಹದ ಮಂಗಲ-4)
ಘಾಲೀನ ಲೋಟಾಂಗಣ ವಂದೀನ ಚರಣ
ದೋಳ್ಯಾನ ಪಾಹೀನ ರೂಪತುಝೆ
ಪ್ರೇಮೆ ಆಲಿಂಗನ ಆನಂದೇ ಪೂಜೀನ
ಭಾವೆ ಓವಾಳಿನ ಮ್ಹಣೆ ನಾಮಾ ||
ತ್ವಮೇವ ಮಾತಾ ಪಿತಾತ್ವಮೇವ
ತ್ವಮೇವ ಬಂಧುಶ್ಚ ಸಖಾತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವ ||
ಕಾಯೇನ ವಾಚಾ ಮನಸೈಂದ್ರಿಯೈರ್ವಾ
ಬುಧ್ಯಾತ್ಮನಾವಾ ಪ್ರಕೃತೇಸ್ವಭಾವಾತ್
ಕರೋಮಿ ಯದ್ಯತ್ ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ ||
ಹರಿನಾರಾಯಣ ದುರಿತ ನಿವಾರಣ
ಪರಮಾನಂದ ಸದಾಶಿವ ಶಂಕರ
ಭಕ್ತ ಜನಪ್ರಿಯ ಪಂಕಜಲೋಚನ
ನಾರಾಯಣ ತವ ದಾಸೋಹಂ ||
ಪಾವನಾ ರಾಮಾ | ಪತಿತಪಾವನಾರಾಮಾ
ಪತಿತ ಪಾವನಾ ರಾಮಾ| ಪತಿತ ಪಾವನಾ ರಾಮಾ ||
ಪಾವನಾ ಕೃಷ್ಣಾ | ಪತಿತ ಪಾವನಾ ಕೃಷ್ಣಾ
ಪತಿತ ಪಾವನಾ ಕೃಷ್ಣಾ ಪತಿತ ಪಾವನಾ ಕೃಷ್ಣಾ ||
ಪಾವನಾಗುರು ಪತಿತಪಾವನಾಗುರು
ಪತಿತಪಾವನಾಗುರು ಪತಿತಪಾವನಾಗುರು ||
ಅಚ್ಚ್ಯುತಂ ಕೇಶವಂ ರಾಮನಾರಾಯಣಂ
ಕೃಷ್ಣದಾಮೋದರಂ ವಾಸುದೇವಂ ಭಜೇ
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ
ಜಾನಕೀ ನಾಯಕಂ ರಾಮಚಂದ್ರಂ ಭಜೇ ||
ಹರೇರಾಮ ಹರೇರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ||
ಹೇಂಚಿದಾನ ದೇಗಾ ದೇವಾ ತುಝಾ ವಿಸರನ ವ್ಹಾವಾ
ತುಝಾ ವಿಸರೂನ ವ್ಹಾವಾ | ತುಝಾ ವಿಸರೂನ ವ್ಹಾವಾ ||
ಗುಣಗಾಯೀನ ಆವಡೀ ಹೇಂಚಿ ಮಾಝಿ ಸರ್ವೈ ಜೋಡಿ
ಹೇಂಚಿ ಮಾಝಿ ಸರ್ವೈ ಜೋಡಿ ಹೇಂಚಿ ಮಾಝಿ ಸರ್ವೈ ಜೋಡಿ
ನ ಲಗೇ ಮುಕ್ತಿ ಧನಸಂಪದಾ ಸಂತಸಂಗೇ ದೇಯೀ ಸದಾ
ಸಂತಸಂಗೇ ದೇಯೀ ಸದಾ ಸಾಧುಸಂಗೇ ದೇಯೀ ಸದಾ ||
ತುಕಾಮ್ಹಣೆ ಗರ್ಭವಾಸಿ ಸುಖೇಘಾಲಾವೇ ಆಮ್ಹಾಸಿ
ಸುಖೇಘಾಲಾವೇ ಆಮ್ಹಾಸಿ ಸುಖೇಘಾಲಾವೇ ಆಮ್ಹಾಸಿ ||
ಆಮ್ಹೀ ಅಪರಾಧೀ ಅಪರಾಧೀ
ಆಮ್ಹಾ ನಾಹೀ ದೃಢ ಬುದ್ದೀ |
ಆಮ್ಹಾ ನಾಹೀ ದೃಢ ಬುದ್ದೀ
ಆಮ್ಹಾ ನಾಹೀ ದೃಢ ಬುದ್ದೀ ||

ಮಾಝೇ ಅನ್ಯಾಯ ಅಗಣಿತ
ಕೋಣ ಕರೀಲ ಗಣಿತ |
ಕೋಣ ಕರೀಲ ಗಣಿತ
ಕೋಣ ಕರೀಲ ಗಣಿತ ||

ಮಾಝೇ ಸರ್ವೈಸ್ವ ಪಾಲಾವೇ
ಪ್ರತಿ ದಿನ ಸಾಂಬಾಳಾವೇ |
ಪ್ರತಿ ದಿನ ಸಾಂಬಾಳಾವೇ
ಪ್ರತಿ ದಿನ ಸಾಂಬಾಳಾವೇ ||

ಮಾಝಿ ವ್ಹಾಯೀಟ ಕರಣೇ ರಾಮದಾಸ ಲೋಟಾಂಗಣೇ
ರಾಮದಾಸ ಲೋಟಾಂಗಣೇ ರಾಮದಾಸ ಲೋಟಾಂಗಣೇ ||
ಅಕಲ್ಪ ಆಯುಷ್ಯ ವ್ಹಾವೆ ತಯಾ ಕುಳಾ
ಮಾಝಿಯಾ ಸಕಳಾ ಹರಿಚ್ಯಾದಾಸಾ
ಕಲ್ಪನೇ ಚೀ ಭಾಧಾ ನ ಹೋತೋ ಅಸಾವೇ
ಹೀ ಸಂತ ಮಂಡಳೀ ಸುಖೀ ಅಸೋ ||
ಅಹಂಕಾರಾಚ್ಯಾ ವಾರಾ ನ ಲಾಗೋ ರಾಜಸ
ಮಾಝಾವಿಷ್ಣುದಾಸ ಭಾವಿಕಾಸೀಂ
ನಾಮಾಮ್ಹಣೆ ತಯಾ ಅಸಾವೇ ಕಲ್ಯಾಣ
ಜ್ಯಾಮುಖೀ ನಿದಾನ ಪಾಂಡುರಂಗಾ |
ಜ್ಯಾಮುಖೀ ನಿದಾನ ಪಾಂಡುರಂಗಾ ||
ಜ್ಞಾನೇಶ್ವರಾ ಜ್ಞಾನೇಶ್ವರಾ ಜ್ಞಾನೇಶ್ವರಾ ಮಾವುಲೀ ತುಕಾರಾಮ್
ಜ್ಞಾನರಾಜ ಮಾವುಲೀ ತುಕಾರಾಮ್
ದತ್ತರಾಜ ಮಾವುಲೀ ತುಕಾರಾಮ್ ||
ನಿವೃತ್ತಿ ಜ್ಞಾನದೇವ್ ಸೋಪಾನ ಮುಕ್ತಾಬಾಯಿ
ಏಕನಾಥ ನಾಮದೇವ ತುಕಾರಾಮ
ಜ್ಞಾನದೇವ ತುಕಾರಾಮ್ | ಜ್ಞಾನೋಬಾ ತುಕಾರಾಮ್
ಜ್ಞಾನದೇವ ತುಕಾರಾಮ್ | ಜ್ಞಾನೋಬಾ ತುಕಾರಾಮ್
ಜ್ಞಾನದೇವ ತುಕಾರಾಮ್ | ಜ್ಞಾನೋಬಾ ತುಕಾರಾಮ್||
ವಿಟ್ಠಲ ವಿಟ್ಠಲ ವಿಟ್ಠಲ ವಿಟ್ಠಲ
ವಿಟ್ಠಲ ವಿಟ್ಠಲ ವಿಟ್ಠಲ ವಿಟ್ಠಲ ||
*****


(ಭಜನಾ ಸಪ್ತಾಹ ಮಂಗಲ -5)
ದೇವಾಧಿದೇವಾ ಪ್ರಭು ವಾಸುದೇವಾ
ಮಾನೂನಿ ಘ್ಯಾವಾ ಹೀ ದಾಸಾಂಚಿ ಸೇವಾ
ಅಪರಾಧ ಕೇಲೆ ಬಹು ಬಾಲಕಾನೀ |
ಕ್ಷಮಾ ಕರಾವೀ ಜಗತ್ಪಾಲಕಾ |
ಜ್ಯಾ ಜ್ಯಾ ಸ್ಥಳೀ ಹೇ ಮನ ಜಾಯ ಮಾಝೇ
ತ್ಯಾ ತ್ಯಾ ಸ್ಥಳೀ ಹೇ ನಿಜ ರೂಪ ತುಝೇ |
ಮೀ ಠೇವಿತೋ ಮಸ್ತಕ ಜ್ಯಾ ಠಿಕಾಣೀ |
ತೆಥೇ ತುಝೆ ಸದ್ಗುರು ಪಾಯ ದೋನಿ ||
*****


ನಮಃ ಪುಂಡರೀಕ ವರದ ಪಾಂಡುರಂಗ | ಹರಿ ವಿಟ್ಠಲ ||
ಸೀತಾಕಾಂತ ಸ್ಮರಣ | ಜೈ ಜೈ ರಾಮ ||
ರಾಧಾಕಾಂತ ಸ್ಮರಣ | ಜೈ ಜೈ ಗೋಪಾಲ ||
ನಮಃ ಪಾರ್ವತೀಪತೇ | ಹರ ಹರ ಮಹಾದೇವ ||
ಶ್ರೀ ಮದ್ರಮಾರಮಣ ಹರಿಗೋವಿಂದಾ | ಗೋವಿಂದ ||
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾ ಪತಯೇ ನಮಃ
ಮಂಗಲಂ ಭಗವಾನ್ ವಿಷ್ಣು | ಮಂಗಲಂ ಮಧುಸೂದನ
ಮಂಗಲಂ ದೇವಕೀ ಪುತ್ರೋ ಮಂಗಲಂ ಗರುಡಧ್ವಜ ||
ಕೃಷ್ಣಾಯ ವಾಸುದೇವಾಯ ದೇವಕೀನಂದನಾಯ ಚ
ನಂದಗೋಪಕುಮಾರಾಯ ಗೋವಿಂದಾಯ ನಮೋ ನಮಃ
ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀ ಮದ್ವೇಂಕಟನಾಥಾಯ ಶ್ರೀನಿವಾಸಾಯತೇ ನಮಃ ||
ಪುಂಡರೀಕ ವರದ ಪಾಂಡುರಂಗ | ಹರಿ ವಿಟ್ಠಲ ||
*****


ಏಕಾಂತ ಸೇವೆಯ ಹಾಡುಗಳು
ಸೋಮವಾರ / ಮಂಗಳವಾರ /
ಶುಕ್ರವಾರ / ಆದಿತ್ಯವಾರ
ಜೋ ಜೋ ಶ್ರೀಕೃಷ್ಣ ಪರಮಾನಂದ
ನಂದಗೋಪಿಯ ಕಂದ ಬಾಲ ಮುಕುಂದಾ | ಜೋ ಜೋ ||
ಪಾಲುಗಡಲೊಳು ಪವಡಿಸಿದವನೇ
ಆಲದೆಲೆಯ ಮೇಲೆ ಮಲಗಿದ ಶಿಶುವೇ
ಶ್ರೀ ಲಲಿತಾಂಗಿಯರ ಚಿತ್ತದೊಲ್ಲಭನೇ
ಬಾಲ ನಿನ್ನನು ಪಾಡಿ ತೂಗುವೆನಯ್ಯಾ ||ಜೋ ಜೋ ||
ಹೊಳೆವಂಥ ರನ್ನದ ತೊಟ್ಟಿಲ ಮ್ಯಾಲೆ
ಥಳಥಳಿಸುವ ಗುಲಗುಂಜಿಯ ಮಾಲೆ
ಅಳದೇ ನೀ ಪಿಡಿದಾಡೆನ್ನಯ ಮುದ್ದು ಬಾಲ
ನಳಿನ ನಾಭನೇ ನಿನ್ನ ಪಾಡಿ ತೂಗುವೆನೂ || ಜೋ ಜೋ ||
ಯಾರ ಕಂದ ನೀನ್ಯಾರ ನಿದಾನಿ
ಯಾರ ರತ್ನವೋ ನೀನ್ಯಾರ ಮಾಣಿಕವೋ
ಸೇರಿತು ಎನಗೊಂದು ಚಿಂತಾಮಣಿಯೆಂದು
ಬಾಲನಿನ್ನನು ಪಾಡಿತೂಗುವೆನಯ್ಯಾ || ಜೋ ಜೋ ||
ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆ
ಮನೆಯ ಕೆಲಸವ್ಯಾರು ಮಾಡುವರಯ್ಯ
ಮನಕೇ ಸುಖನಿದ್ರೆ ತಂದುಕೋ ಬೇಗ
ಫಣಿಶಯನನೇ ನಿನ್ನ ಪಾಡಿ ತೂಗುವೆನೋ || ಜೋ ಜೋ|||
ಅಂಡಜವಾಹನ ಅನಂತ ಮಹಿಮಾ
ಪುಂಡರೀಕಾಕ್ಷ ಶ್ರೀ ಪರಮಪಾವನ್ನಾ
ಹಿಂಡು ದೈವದ ಗಂಡ ಉದ್ಧಂಡನೇ
ನಮ್ಮ ಪಾಂಡುರಂಗ ಶ್ರೀ ಪುರಂದರ ವಿಠಲಾ || ಜೋ ಜೋ ||
*****


ಜೋಗುಳ - ಶ್ರೀ ರಾಮ (ಬುಧವಾರ)
ಆನಂದಾssssss ರಾಮಾ ಜೋ ಜೋ ಜೋ ರಾಮಾ ||
ರಾಮಾ ಜೋ ಜೋ ರಘುಕುಲ ತಿಲಕ
ರಾಮಾ ಜೋ ಜೋ ಕುಟಿಲತ ತಿಲಕ || ರಾಮಾ ಜೋ....||
ರಾಮಾ ಜೋ ಜೋ ದಶರಥ ಬಾಲಾ
ರಾಮಾ ಜೋ ಜೋ ದಶಮುಖ ಕಾಲಾ || ರಾಮಾ ಜೋ....||
ರಾಮಾ ಜೋ ಜೋ ರವಿಶಶಿನಯನಾ
ರಾಮಾ ಜೋ ಜೋ ಫಣಿವರ ಶಯನಾ || ರಾಮಾ ಜೋ....||
ರಾಮಾ ಜೋ ಜೋ ಮಾನುಷ ವೇಷಾ
ರಾಮಾ ಜೋ ಜೋ ಮಂಜುಳ ಭೂಷಾ || ರಾಮಾ ಜೋ....||

ರಾಮಾ ಜೋ ಜೋ ಪಂಕಜನೇತ್ರಾ
ರಾಮಾ ಜೋ ಜೋ ಶಂಕರ ಮಿತ್ರಾ || ರಾಮಾ ಜೋ....||
ರಾಮಾ ಜೋ ಜೋ ನಿರ್ಗುಣ ಚಿತ್ತಾ
ರಾಮಾ ಜೋ ಜೋ ಸದ್ಗುಣ ಪಾತ್ರಾ || ರಾಮಾ ಜೋ....||
ರಾಮಾ ಜೋ ಜೋ ತ್ಯಾಗರಾಜಾ |
ರಾಮಾ ಜೋ ಜೋ ಭಕ್ತಸಮಾಜಾ || ರಾಮಾ ಜೋ....||
*****


ಏಕಾಂತ ಸೇವೆ (ಗುರುವಾರ)
ವ್ಯಾಸಾ ಜೋ ಜೋ ಜೋ ವ್ಯಾಸಾ
ಅನಂತಾನಂತಾ ಜೋ ಜೋ ಜೋ ವೇದವ್ಯಾಸಾ ||
ವ್ಯಾಸಾ ಜೋ ಜೋ ಮುನಿಕುಲತಿಲಕಾ |
ವ್ಯಾಸಾ ಜೋ ಜೋ ಜ್ಞಾನ ಸ್ವರೂಪಾ || ವ್ಯಾಸಾ.....||
ವ್ಯಾಸಾ ಜೋ ಜೋ ಪರಾಶರ ಪುತ್ರಾ |
ವ್ಯಾಸಾ ಜೋ ಜೋ ಸತ್ಯವತೀ ಸುಪುತ್ರಾ ||ವ್ಯಾಸಾ.....||
ವ್ಯಾಸಾ ಜೋ ಜೋ ಶುಕಮುನಿ ತಾತಾ |
ವ್ಯಾಸಾ ಜೋ ಜೋ ವಾಸಿಷ್ಠಗೋತ್ರಾ ||ವ್ಯಾಸಾ.....||
ವ್ಯಾಸಾ ಜೋ ಜೋ ಕುರುಕುಲ ತ್ರಾತಾ
ವ್ಯಾಸಾ ಜೋ ಜೋ ಜ್ಞಾನಾಭಯ ಪ್ರದಾತಾ ||ವ್ಯಾಸಾ.....||

ಬಾದರಾಯಣ ವ್ಯಾಸಾಕ ಲಾಲಿ |
ಬದರೀವಾಸಾ ಶ್ರೀ ವ್ಯಾಸಾಕ ಲಾಲಿ |
ಹರಿಗುರು ರೂಪಾ ಶ್ರೀ ವ್ಯಾಸಾಕ ಲಾಲಿ |
ಶ್ರೀ ಗುರುಸುಧೀಂದ್ರ ಪ್ರೀತಾಕ ಲಾಲಿ || ವ್ಯಾಸಾ.....||
*****


ಏಕಾಂತ ಸೇವೆ (ಶನಿವಾರ)
ಜೋ ಜೋ ಬಾಲಕೃಷ್ಣ
ಜೋಗುಳವ ಪಾಡುತ್ತಾ ತೂಗುವೆ ನಾ || ಜೋ ಜೋ ||
ಭೂಮಿಯ ಚಿನ್ನದ ತೊಟ್ಟಿಲು ಮಾಡಿ
ಸೋಮ ಸೂರ್ಯರೆಂಬ ಕಲಶವ ಮಾಡಿ
ಆ ಮಹಾ ಆಕಾಶಕಂದಟ ಮಾಡಿ
ಜೋಜೋ ಜೋಜೋ ಜೋ ಎಂದು ಪಾಡಿ || ಜೋ ಜೋ ||
ವಸುದೇವ ಸುತನಾದ ಮುದ್ದು ಮುರಾರಿ
ಅಸುರ ಪೂತನಿಯ ಪ್ರಾಣಾಪಹಾರಿ
ಅಸಮ ಸಾಹಸಮಲ್ಲ ದೈತ್ಯರವೈರಿ
ಶಿಶುವಾಗಿ ದೇವಕಿಗೆ ಆನಂದ ತೋರಿ || ಜೋ ಜೋ ||
ಕ್ಷೀರಾಂಬುಧಿಯನ್ನು ತೊಟ್ಟಿಲು ಮಾಡಿ
ನಾಲ್ಕುವೇದಗಳಿಂದ ಸರಪಣಿ ಮಾಡಿ
ಶೇಷದೇವರು ಬಂದು ಹಾಸಿಗೆಯಾಗಿ
ಲಕ್ಷ್ಮೀ ಸಹಿತ ಪವಡಿಸಿದ ಹಯವದನ || ಜೋ ಜೋ ||

ಬುದ್ಧನಾಗಿ ದೈತ್ಯರನ್ನಳಿದೆಯಲ್ಲೋ
ಮುದ್ದು ತುರಗವೇರಿ ಕಲಿಯಾದೆಯಲ್ಲೋ
ಪದುಮನಾಭ ಶ್ರೀ ಭಕ್ತ ವತ್ಸಲಾ
ಭದ್ರದಿ ಕಾಯಯ್ಯಾ ಶ್ರೀ ರಂಗ ವಿಠಲಾ || ಜೋ ಜೋ ||
*****


ಗುರುಭಜನೆ (ಒಂದನೇ ದಿನ)
ಜಯಗುರು ಭುವನೇಂದ್ರಾ | ಶ್ರೀ ವರಗುರು ಭುವನೇಂದ್ರಾ | ಕಾಮಿತ ಫಲದಾತಾ ತೂ |
ಕಾಮಿತ ಫಲದಾತಾ ತೂ | ಸನ್ನುತ ಗುಣ ಸಾಂದ್ರಾ|
ಸ್ವಾಮಿ ಸನ್ನುತ ಗುಣಸಾಂದ್ರಾ ||
ಕಾಶೀಮಠ ಸಂಸ್ಥಾನ್ | ವರಶ್ರೀ ಕಾಶೀಮಠ ಸಂಸ್ಥಾನ್
ವ್ಯಾಸರಘುಪತೀ ಪೂಜನ | ವ್ಯಾಸರಘುಪತಿ ಪೂಜನ
ದಿತ್ತಾ ಸಕಲ ಸಮ್ಮಾನ್ | ಸ್ವಾಮೀ | ದಿತ್ತಾ ಸಕಲ ಸಮ್ಮಾನ್ ||
ಕಾಶಿಮಠಾಚೆ ನಿಜ ಸೇವಕ ಸ್ವಾಮೀ |
ಪರಂಪರೇಂತು ಸತರಾವೇ | ಸ್ವಾಮಿ | ಪರಂಪರೇಂತು ಸತರಾವೇ | ವಸುದೇಂದ್ರ ತೀರ್ಥ ಸ್ವಾಮೆಲೇ |
ಶಿಷ್ಯ ರತ್ನ ಶೋಭಲೇ | ಸ್ವಾಮೀ ಶಿಷ್ಯ ರತ್ನ ಶೋಭಲೇ||
ವಿದ್ಯಾ ವಿನಯ ಸಂಪನ್ನ | ಪಂಡಿತ ಸಾಧುಜನ ಪ್ರಸನ್ನ |
ಶಿಷ್ಯ ಜನಾಲೇಂ ಉದ್ಧಾರಣಾ | ಶಿಷ್ಯ ಜನಾಲೇ ಉದ್ಧಾರಣ |
ಸತ್ಯ ಕಾರ್ಣಿಕ ಪೂರ್ಣ ಸ್ವಾಮೀ | ಸತ್ಯ ಕಾರ್ಣಿಕ ಪೂರ್ಣ ||
ಧನ್ವಂತರಿ ತೂ ಸತತ ಭಿನ್ನಜ್ಞಾನ ಪರಿಪೂರ್ಣ
ಸತತ | ಭಿನ್ನ ಜ್ಞಾನ ಪರಿಪೂರ್ಣ |
ವೈದ್ಯ ಮೂರುತಿ ಗುರುರಾಜಾ |
ಅನಾದಿ ರೋಗಹರಾ ಸ್ವಾಮೀ | ಅನಾದಿ ರೋಗ ಹರಾ ||
ಭೂಕ ಆಯಿಲ್ಯಾಕ ಅನ್ನ | ಸಂತತಿ ಚುಕಿಲ್ಯಾಕ ಸಂತಾನ |
ಸಂತತಿ ಚುಕಿಲ್ಯಾಕ ಸಂತಾನ | ವಿಷ ವಿಮೋಚನ ಪ್ರಾಣದಾನ
ದಿಲ್ಲೇಂ ಪರತೂನ | ತೂವೆ ದಿಲ್ಲೆ ಪರತೂನ ||
ಭವ ಶರಧೀಂತು ಹಾಂವ ಭಾರೀ ಭಾರೀ ತಡಪಡತಾ |
ಹಾಂವ | ಭಾರೀ ತಡಪಡತಾ
ಶ್ರೇಯ ದೀ ಭುವನಾಂತೂಂ | ಶ್ರೇಯ ದೀ ಭುವನಾಂತೂಂ
ಶ್ರೀ ಪಾದಾಂಕ ಹಾತ ಜೋಡ್ತಾ ||
ಸ್ವಾಮೀ | ಶ್ರೀ ಪಾದಾಂಕ ಹಾತ ಜೋಡತಾ ||
*****


ಎರಡನೇ ದಿನ
ವರದೇಂದ್ರ ಸದ್ಗುರುವೇ ಸುರಪೇಂದ್ರ ಸುರ ತರುವೇ | ವರಚಂದ್ರಮುಖ ಸುಮಹೇಂದ್ರ ಸದ್ಗುಣಸಾಂದ್ರ ಶ್ರೀ ಪ್ರಭುವೇ ||
ಕಾಶೀಮಠಾಧಿಪತೇ | ದೇಶಾಭಿಮಾನಗತೇ |
ಶ್ರೀ ವ್ಯಾಸ ರಘುಪತಿ ದಾಸಗುರು ಉಪದೇಶ-ಭಾಷಯತೇ ||
ಶಾಸ್ತ್ರಾರ್ಚ ನಾನುಮತೇ | ಸ್ತೋತ್ರಾನುಪಾತ್ರಯತೇ |
ನೇತ್ರಾಬ್ಜನಾಸಿಕ ಚಂಪಕೋಪಮ | ಸಾಂಖ್ಯ ಯೋಗಪತೇ ||
ವೇದಾಂತ ಸುವಿಚಾರಾ | ನಾದಾಂತ ನಿರ್ವಿಕಾರಾ |
ಭೋದಾಂತರಾಂತರ ಮಧ್ವಮತ ಸಂಭೋಧಕಾ ಪ್ರಚುರಾ ||
ರೂಪಾದಿ ಮನ್ಮಥನೇ | ತಾಪತ್ರಯವಿಘತನೇ |
ಪಾಪಾದಿ ಕುಲ ಸಂದೀಪ ತಾಮಸ ಲೇಪ-ವಿರಹಿತನೇ ||
ಶ್ರೀ ಶಂಕರಾಕರನೇ | ಶ್ರೀ ಶಂಕರ ಪ್ರಿಯಕರನೇ |
ಪದ ಪಂಕಜಾಳಿಪ ಕೊಂಕಣಾವಳಿ | ಕಿಂಕರೋದರನೇ ||
ಮಮ ತಂದೆ ಬಂಧು ಗುರೂ | ಮಮ ಮಂದ ದೇವ ಗುರೂ |
ಮಮ ಮಂದಿರೇಶನೇ | ಶ್ರೀನಿವಾಸನೇ ಇಂದು ಮೈದೋರು ||
*****


ಮೂರನೇ ದಿನ
ಆಶ್ರಿತ ಪರಿಪಾಲಯತೇ | ಸುಕೃತೀಂದ್ರಾ-ಯತೀಂದ್ರಾ ನಮೋ ||
ದಾಸಜನರ ಮನದಾಸೆ ಸಲಿಸಲು
ವ್ಯಾಸರಘುಪತಿಯ ಅಂಘ್ರಿಯ ಭಜಿಸುವ
ಈಸುಪಾದ ಪೂಜಿಸುವ ಜನರ ಅಘ
ನಾಶಗೊಳಿಸಿ ಸದ್ಗತಿಯ ನೀಡುವಾ | ಶ್ರೀ |
ಸುಕೃತೀಂದ್ರಾ ಯತೀಂದ್ರಾ ನಮೋ ||
ಪರಿಧಾವಿಯಲಿ ಸ್ವೀಕರಿಸಿ ಸಂನ್ಯಾಸವ |
ಕಾಶೀಮಠದ ಸುರತರುವರೆಂದೆನಿಸಿ
ಕರಕಮಲ ಸಂಜಾತ ಸುಧೀಂದ್ರರÀ
ಪರಮಪೂಜ್ಯ ಶ್ರೀ ಗುರುವರರೆನಿಸಿದ
ಶ್ರೀ ಸುಕೃತೀಂದ್ರಾ ಯತೀಂದ್ರಾ ನಮೋ ||
*****


ನಾಲ್ಕನೇ ದಿನ
ನುತಿಸಳಲವೇ ಯತಿ ಸುಧೀಂದ್ರರನು |
ಕಾಶೀಮಠಾಧಿಪ | ಪ್ರಚುರ ಹಿತ ಸುಪವಿತ್ರ- ಗುರುಗಳನು ||
ಕೃತುಭಯಾರ್ಚಿತ ವ್ಯಾಸ - ರಘುಪತಿ |
ಶೃತಿಗಗಮ್ಯ ಪದಾಬ್ಜ ಮಧುಕರ |
ಸತತ ಪಾವನ ಧರ್ಮ ಪರಿಪಾಲಿಪ ಗುಣಾನ್ವಿತ ದಿವ್ಯ ಮೂರ್ತಿಯ ||
ಭುವನ ಮೋಹಿಪ ತಿಲಕ ನಡುನಿಖಿಳ |
ಕಸ್ತೂರಿ ಶೋಭಿಪ ನವರತುನ ಶೃಂಗಾರ ಹಾರಗಳಾ |
ಜವನ ಜಯಿಸುವ ದಂಡಪಾಶಕ |
ನಿವಹ ಜಯಿಸುವ ಜಲ ಕಮಂಡಲ | ವಿವಿಧ ಕಾವಾಂಬರ ವಿರಾಜಿಪ |
ನವಯುಗಳ ಪಾದುಕೆಗಳರ್ಥಿಯ ||
ವೇದ ಶಾಸ್ತ್ರಗಳಾದಿ ಸಂಪನ್ನ | ಸುಜ್ಞಾನ ಜಲನಿಧಿ
ಸಾಧುಶೀಲ ಸ್ಮರಾದಿ ರಿಪುದಮನ ||
ಸಾಧಿಸುತ ಜಪಧ್ಯಾನ ವೇದತಪಾದಿ ನೇಮವನಾಚರಿಸಿ ಬಲು | ಗೌಡಸಾರಸ್ವತ ಬುಧಾನ್ವಯ ಮೋದದಿಂದುಚ್ಛರಿಪ ಮಹಿಮರ ||
ವರುಷ ತಾರಣ ಜ್ಯೇಷ್ಠ ನಿಜಪಕ್ಷ |
ಮಿತಿ ಬಿದಿಗೆ ಬುಧವಾಸರದಿ ಒಳಲಂಕೆಯೊಳು ಯತಿ ದೀಕ್ಷಾ |
ಹರುಷದಿಂ ಸ್ವೀಕರಿಸಿ ವಿಭವದಿ ಪರಮಗುರು ಸುಕೃತೀಂದ್ರ ತೀರ್ಥರ ||
ಕರಕಮಲ ಸಂಜಾತರೆನಿಪರ | ಮೆರೆವ ಕೀರ್ತಿ ಕಲಾಪ ನಿಧಿಯರ ||
ಸಂತೋಷ ಭರಿತ ಪ್ರಕಾಶಮಯ ವದನಾ |
ನಯನಾಂಬುರುಹ ಸಮ ವ್ಯಾಸಮುಕ್ತದ ಲೋಲ ಪರಿನಯನ
ದ್ವೇಷ (ಕ್ಲೇಶ) ವಿರಹಿತ ಹೃದಯ ವಿಕಸಿತ |
ದೋಷವರ್ಜಿತ ಚರಣ ಕೋಮಲ |
ಮಿತ್ರಗಾತ್ರ ಮಧುರ ಭವಜಿತ | ಭಾಸುರಾಂಗದ ವ್ಯಾಸ ಮುದ್ರರ ||
ದೇಶಪಾವನ ಕೀರ್ತಿ ಜಯ ಬೆಳೆಸಿ |
ನಿಜ ಶಿಷ್ಯವರ್ಗಕೆ ಆಶು ಫಲಮಂತ್ರಾಕ್ಷತೆಯ ಸಲಿಸೀ |
ಈಸು ಫಲಪ್ರದ ಪೂಜಿಸುವ ಜನರಾಸೆಗೊಳಿಸುವ ಸತ ಸದಾಶಿವ | ವ್ಯಾಸ ರಘುಪತಿ ಶ್ರೀನಿವಾಸರ ಧ್ಯಾನದಿಂದರ್ಚಿಪ ಮಹಾತ್ಮರ ||
*****


ಗುರು ಭಜನೆ (ಗುರುವಾರ)
( ಭಜನಾ ಸಪ್ತಾಹದ ಮಂಗಲ - 6 )
ಜಯನಾರಾಯಣ ಜಯ ಜಗ ಕಾರಣ
ಜಯದ್ವೈಪಾಯನ ರಘುರಾಮಾ |
ಜಯ ಭಾರತೀಪತಿ ಮುಖ್ಯಪ್ರಾಣಾ
ಜಯ ಮಧ್ವನೇ ಜಯ ಬಲಭೀಮಾ ||
ಯಾದವ ಕೇಶವ ಉಪೇಂದ್ರ ಯಾದವ
ರಾಘವೇಂದ್ರ ದೇವೇಂದ್ರ ಗುರು |
ಮಾಧವೇಂದ್ರ ಜ್ಞಾನೀಂದ್ರ ಯಾದವರು
ಉಪೇಂದ್ರ ರಾಜೇಂದ್ರ ಕಲ್ಪತರು ||
ವಿಷ್ಣುತೀರ್ಥ ಸೂರೀಂದ್ರ ವಿಭುದೇಂದ್ರ
ಸಹಿಷ್ಣು ಸುಮತಿ ವಸುಧೇಂದ್ರ ಯತಿ |
ಭುವನಕ್ಕೊಡೆಯ ವರದೇಂದ್ರ ಸುಕೃತೀಂದ್ರ
ಸುಧೀಂದ್ರ ಗುರುವೇ ನೀವೆಮಗೆ ಗತಿ ||
ಕಾಶೀಮಠದ ಸನ್ಯಾಸಿಶಿಷ್ಯ ಹರಿ
ವ್ಯಾಸರಘುಪತಿಯ ದಾಸರಿಗೆ |
ಸಾಸಿರ ಪ್ರಣಾಮ ಶ್ರೀ ಸುಧೀಂದ್ರರಲಿ |
ಸಾಸಿರ ಪ್ರಣಾಮ ಸಂಯವಿೂಂದ್ರರಲಿ
ವಾಸಿಪ ಮೂಲ ನಾರಾಯಣಗೆ ||
*****


ಓಂ ಗುರು ಓಂ ಗುರು ನಮೋ ನಮೋ ಗುರು
ಭುವನೇಂದ್ರ ಗುರು ನಮೋ ನಮೋ
ಭುವನೇಂದ್ರ ಗುರು ನಮೋ ನಮೋ ಗುರು
ವರದೇಂದ್ರ ಗುರು ನಮೋ ನಮೋ

ಓಂ ಗುರು ಓಂ ಗುರು ನಮೋ ನಮೋ ಗುರು
ವರದೇಂದ್ರ ಗುರು ನಮೋ ನಮೋ
ವರದೇಂದ್ರ ಗುರು ನಮೋ ನಮೋ ಗುರು
ಸುಕೃತೀಂದ್ರ ಗುರು ನಮೋ ನಮೋ
ಓಂ ಗುರು ಓಂ ಗುರು ನಮೋ ನಮೋ ಗುರು
ಸುಕೃತೀಂದ್ರ ಗುರು ನಮೋ ನಮೋ
ಸುಕೃತೀಂದ್ರ ಗುರು ನಮೋ ನಮೋ ಗುರು
ಸುಧೀಂದ್ರ ಸದ್ಗುರು ನಮೋ ನಮೋ
ಓಂ ಗುರು ಓಂ ಗುರು ನಮೋ ನಮೋ ಗುರು
ಸುಧೀಂದ್ರ ಸದ್ಗುರು ನಮೋ ನಮೋ
ಸುಧೀಂದ್ರ ಸದ್ಗುರು ನಮೋ ನಮೋ ಗುರು
ಸಂಯಮೀಂದ್ರ ಗುರು ನಮೋ ನಮೋ
ಓಂ ಗುರು ಓಂ ಗುರು ನಮೋ ನಮೋ ಗುರು
ಸಂಯಮೀಂದ್ರ ಗುರು ನಮೋ ನಮೋ
ಮಧ್ವಗುರೋ ಮಧ್ವಗುರೋ ಮಧ್ವಾಂತರ್ಗತ ವ್ಯಾಸಗುರೋ
ಭವಹರಿಸೈ ಭುವನೇಂದ್ರ ಗುರೋ
ವರವನೀಯೋ ವರದೇಂದ್ರ ಗುರೋ

ಸುಖವನೀಯೋ ಸುಕೃತೀಂದ್ರ ಗುರೋ
ಸನ್ಮತಿಯೀಯೋ ಸುಧೀಂದ್ರ ಗುರೋ
ಸಂಯಮ ಕೊಡೋ ಸಂಯಮೀಂದ್ರ ಗುರೋ
ಮಧ್ವಗುರೋ, ಮಧ್ವಗುರೋ ಮಧ್ವಾಂತರ್ಗತ ವ್ಯಾಸಗುರೋ ||

(ಭಜನಾ ಸಪ್ತಾಹದ ಮಂಗಲ - 7)
ಶ್ರೀ ಮಧ್ಭುವನೇಂದ್ರ ತೀರ್ಥ ಸ್ವಾಮೀ ಮಹಾರಾಜಾಕೀ ಜೈ ||
ಶ್ರೀ ಮದ್ವರದೇಂದ್ರ ತೀರ್ಥ ಸ್ವಾಮೀ ಮಹಾರಾಜಾಕೀ ಜೈ ||
ಶ್ರೀ ಮತ್ಸುಕೃತೀಂದ್ರ ತೀರ್ಥ ಸ್ವಾಮೀ ಮಹಾರಾಜಾಕೀ ಜೈ ||
ಶ್ರೀ ಮತ್ಸುಧೀಂದ್ರ ತೀರ್ಥ ಸ್ವಾಮೀ ಮಹಾರಾಜಾಕೀ ಜೈ ||
ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀ ಮಹಾರಾಜಾಕೀ ಜೈ ||
ಶ್ರೀ ಕಾಶೀಮಠ ಸಂಸ್ಥಾನ್ ಕೀ ಜೈ
ಶ್ರೀ ವ್ಯಾಸ ರಘುಪತೀ ಮಹಾಪ್ರಭೂಕೀ ಜೈ
ಶ್ರೀ ಮುರಲೀಧರ ಕೃಷ್ಣ ಭಗವಾನಕೀ ಜೈ
ಶ್ರೀ ವೀರಹನುಮಾನ್‍ಕೀ ಜೈ
*****


ಓಂ ಶ್ರೀರಾಮ ಜಯರಾಮ ಜಯ ಜಯ ರಾಮ ಓಂ (ಹತ್ತು ಬಾರಿ)
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ (ಹತ್ತು ಬಾರಿ)


ಶ್ರೀ ಕೃಷ್ಣಾಷ್ಟಕಂ
|| ಶ್ರೀ ಮುರಲೀಧರ ಕೃಷ್ಣಾಯ ನಮಃ ||
ಶ್ರೀ ವೇಣುಗೋಪಾಲಮಚಿಂತ್ಯ ರೂಪಂ
ಶ್ರೀ ವತ್ಸ ಭೂಷಾನ್ವಿತ ಚಾರು ದೇಹಂ
ಶ್ರೀ ರುಕ್ಮಿಣೀ ಪ್ರಾಣಸಖಂ ಶರಣ್ಯಂ
ಸ್ಮರಾಮಿ ಕೃಷ್ಣಂ ಧೃತ ರಮ್ಯ ವೇಣುಂ ||
ಸ್ಮರಾಮಿ ಬ್ರಹ್ಮಾದ್ಯಮರೈಕ ವಂದ್ಯಂ
ಸ್ಮರ ಪ್ರಭಾಭಂ ಶ್ರುತಿ ವಾಕ್ಯಂ ವೇದ್ಯಂ
ಸ್ಮರಾಮಿ ಷಡ್ದೋಷ ವಿದೂರಮೀಶಂ
ಸ್ಮರಾಮಿ ಕೃಷ್ಣಂ ಧೃತ ರಮ್ಯ ವೇಣುಂ ||
ಶ್ರೀ ಪಾಶಿತೀರ್ಥಸ್ಯ ಪುರಪ್ರದೇಶೇ
ಶ್ರೀ ಪಾರ್ವತೀ ಶಂಕರಯೋಸ್ಯ ಮಧ್ಯೇ
ಸ್ಥಿತಂ ಸದಾ ಕೂಟ ಪುರೇ ಪ್ರಸಿದ್ಧೇ
ಸ್ಮರಾಮಿ ಕೃಷ್ಣಂ ಧೃತ ರಮ್ಯ ವೇಣುಂ ||
ಕಾಶೀಮಠಾಧೀಶ ಯತೀಂದ್ರ ದತ್ತಾಂ
ಆಜ್ಞಾಂ ಸಮಾದಾಯ ಶುಭೇ ಮುಹೂರ್ತೇ
ಪ್ರತಿಷ್ಠಿತಂ ಪ್ರಾಚಿತ ಕಲ್ಪವೃಕ್ಷಂ
ಸ್ಮರಾಮಿ ಕೃಷ್ಣ್ಣಂ ಧೃತರಮ್ಯ ವೇಣುಂ ||
ಸದ್ಗೌಡ ಸಾರಸ್ವತ ವಂಶಜೇನ
ಸುಬ್ರಾಯ ಭಟ್ಟೇನ ನೃಸಿಂಹಜೇನ
ಸಂಪ್ರಾರ್ಥಿತಂ ವಂಶ ವಿವರ್ಧನಾಯ
ಸ್ಮರಾಮಿ ಕೃಷ್ಣಂ ಧೃತರಮ್ಯ ವೇಣುಂ ||
ಶರಾಬ್ಧಿ ನಾಗಾಬ್ಜಮಿತೇತ್ರ ಶಾಕÉೀ
ವೃಷೋದಯೇ ಸೂರ್ಯದಿನೇ ನೃಭೇಚ
ಮಾಘೇ ಪ್ರತಿಷ್ಠಾಲಯ ಸುಪ್ರತಿಷ್ಠಂ
ಸ್ಮರಾಮಿ ಕೃಷ್ಣಂ ಧೃತರಮ್ಯ ವೇಣುಂ ||
ಶ್ರೀ ಪಾರ್ವತೀ ಶಂಕರ ಸಂಯುತೋ ಯಃ
ಸದಾಮುದಾ ರಕ್ಷತಿ ಸಜ್ಜನೌಘಂ
ಸದ್ಭಕ್ತ ಭಕ್ತ್ಯಾ ಧೃತಪಾದ ಯುಗ್ಮಂ
ಸ್ಮರಾಮಿ ಕೃಷ್ಣಂ ಧೃತ ರಮ್ಯ ವೇಣುಂ ||
ಶ್ರೀ ಕೃಷ್ಣ ದೇವಸ್ಯ ಶುಭಂ ಪವಿತ್ರಂ
ಸದಾಷ್ಟಕಂ ಯಃ ಪಠತೀಹ ಭಕ್ತ್ಯಾ
ತಸ್ಯಾಯುರಾರೋಗ್ಯಮಭೀಪ್ಸಿತಂ ಚ
ದದಾತಿ ಕೃಷ್ಣೋತ್ರ ಪರತ್ರ ಮೋಕ್ಷಂ ||
*****


ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ
ಪ್ರಣತ ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ
ಮನೋಜವಂ ಮಾರುತತುಲ್ಯ ವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ
ವಾತಾತ್ಮಜಂ ವಾ ನರಯೂಥ ಮುಖ್ಯಂ
ಶ್ರೀ ರಾಮದೂತಂ ಶಿರಸಾ ನಮಾಮಿ ||
ಬ್ರಹ್ಮಾಂತಾಃ ಗುರವಃ ಸಾಕ್ಷಾತ್ ಇಷ್ಟಂ ದೈವಂ ಶ್ರೀಯಃ ಪತಿಃ
ಆಚಾರ್ಯಃ ಶ್ರೀಮದಾಚಾರ್ಯಾಃ ಸಂತುಮೇ ಜನ್ಮಜನ್ಮನಿ ||
ಮಾತೃದೇವೋಭವ | ಪಿತೃದೇವೋಭವ ||
ಆಚಾರ್ಯ ದೇವೋಭವ | ಅತಿಥಿ ದೇವೋಭವ ||
ವಿಸರ್ಗಬಿಂದು ಮಾತ್ರಾಣಿ ಪದ ಪಾದಾಕ್ಷರಾಣಿವಾ |
ನ್ಯೂನಂ ವಾ ಅಪ್ಯತಿರಿಕ್ತಂ ವಾ ಕ್ಷಮಸ್ವ ಪುರುಷೋತ್ತಮ ||
*****


ದೇವಾ| ಪರಮಾತ್ಮಾ | ಸಮರ್ಥಾ | ದಯಕರಿ
ತುಗ್ಗೆಲ್ಯಾ ಅನುಗ್ರಹಾ ಖಾತಿರ
ಶೃದ್ಧೇನ ಪ್ರೀತೀನ ಆರಾಧನಾ ಕೆಲ್ಯಾ |
ಅಪರಾಧು ಕ್ಷಮ ಕರಿ | ಆರಾಧನಾ ಸ್ವೀಕಾರ ಕರಿ |
ಜಗಾಂತು ಸರ್ವಾಂಕಯೀ ಜ್ಞಾನ ಅಭಯ ದೀ | ಉದ್ಧಾರ ಕರಿ |
ಪ್ರತ್ಯೇಕ | ಭಾರತಾಂತು ಸರ್ವಾಂಕಯೀ ಉದ್ಧಾರು ಕರಿ |
ಹೀ ವಿನಮ್ರ ಪ್ರಾರ್ಥನಾ | ಅನುಗ್ರಹ ಕರಿ |

ಜ್ಞಾನಾಭಯ ಪ್ರದಾತಾ ಭಗವಾನ್ ಶ್ರೀ ವೇದವ್ಯಾಸಕೀ ಜೈ
ಜ್ಞಾನಾಭಯ ಪ್ರದಾತಾ ಭಗವಾನ್ ಶ್ರೀ ವೇದವ್ಯಾಸಕೀ ಜೈ
ಜ್ಞಾನಾಭಯ ಪ್ರದಾತಾ ಭಗವಾನ್ ಶ್ರೀ ವೇದವ್ಯಾಸಕೀ ಜೈ
ಜೈ ಜೈ ಗುರು ಮಹಾರಾಜಕೀ ಜೈ
ಬೋಲೋ ಸಬಸಂತಕೀ ಜೈ
ವೇದವ್ಯಾಸಾ ಬಾದರಾಯಣಾ ಗೋವಿಂದಾ | ಗೋವಿಂದ |
ಗಂಗಾ ಮೈಯ್ಯಾ ಕೀ ಜೈ |
ಶ್ರೀನಿವಾಸಾ ವೆಂಕಟರಮಣಾ ಗೋವಿಂದಾ | ಗೋವಿಂದ |
ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀ ಮಹಾರಾಜಕೀ ಜೈ
ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀ ಮಹಾರಾಜಕೀ ಜೈ
ಕಾಶೀಮಠಾಧೀಶಕೀ ಜೈ | ಶ್ರೀ ಕಾಶೀಮಠ ಸಂಸ್ಥಾನಕೀ ಜೈ
*****


|| ಶ್ರೀ ಕಾಶೀಮಠಾಚೆ ಗುರುಪರಂಪರಾ ಸ್ತೋತ್ರ
ಓಂ ಗುರು ಜಯಗುರು ಸಚ್ಚಿದಾನಂದ
ಸಚ್ಚಿದಾನಂದ ಗುರು ಸಚ್ಚಿದಾನಂದ ||
ಯಾದವೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||1||
ಕೇಶವೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||2||
ಉಪೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||3||
ಯಾದವೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ............ ||4||
ರಾಘವೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||5||
ದೇವೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||6||
ಮಾಧವೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||7||
ಜ್ಞಾನೀಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||8||
ಯಾದವೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||9||
ಉಪೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||10||
ರಾಜೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||11||
ಶ್ರೀವಿಷ್ಣು ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||12||
ಸೂರೀಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||13||
ವಿಭುದೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||14||
ಸುಮತೀಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||15||
ವಸುದೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||16||
ಭುವನೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||17||
ವರದೇಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||18||
ಸುಕೃತೀಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||19||
ಸುಧೀಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||20||
ಸಂಯಮೀಂದ್ರ ತೀರ್ಥ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ........... ||21||



ವೇದವ್ಯಾಸ ವೇದವ್ಯಾಸ ವೇದವ್ಯಾಸ ಪಾಹಿಮಾಂ |
ವೇದವ್ಯಾಸ ವೇದವ್ಯಾಸ ವೇದವ್ಯಾಸ ರಕ್ಷಮಾಂ ||
ಬದರಿ ನಿವಾಸ ಬಾದರಾಯಣ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||1||
ಜ್ಞಾನದಾತಾ ಅಭಯದಾತಾ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||2||
ಹೇ ಪರಮೇಶ್ವರ ಬ್ರಹ್ಮಪರಾತ್ಪರ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||3||
ಅನಾಥನಾಥಾ ದೀನನಾಥಾ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||4||
ತಿರುಪತಿವಾಸಾ ವೇಂಕಟೇಶ್ವರಾ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||5||
ಹರಿನಾರಾಯಣ ದುರಿತನಿವಾರಣ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||6||
ಪಾರ್ಥಸಾರಥಿ ವ್ಯಾಸರಘುಪತಿ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||7||
ಶ್ರೀ ಗೋವಿಂದಾ ಗೋಕುಲಾನಂದ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||8||
ನಂದಕುಮಾರಾ ನವನೀತಚೋರಾ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||9||
ಪಾಂಡುರಂಗಾ ಪಂಡರಿನಾಥಾ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||10||
ದಶರಥನಂದನ ರಘುಕುಲಭೂಷಣ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||11||
ಸಚ್ಚಿದಾನಂದ ಸತ್ಯವತೀಸುತ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||12||
ಚಿನ್ಮಯರೂಪಾ ಹೃದಯನಿವಾಸಾ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||13||
ಪತಿತಪಾವನಾ ಪರಾಶರಪುತ್ರಾ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||14||
ವೇದೋದ್ಧಾರಕ ವೇದವಿಭಾಜಕ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||15||
ಪರಮಪವಿತ್ರ ಬ್ರಹ್ಮಸ್ವರೂಪ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||16||
ಭಕ್ತಿದಾತಾ ಮುಕ್ತಿದಾತಾ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||17||
ಚಿದಾಕಾರಾ ಚಿತ್‍ಸ್ವರೂಪಾ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||18||
ಜಯಜಗದೀಶ್ವರ ಜಗದೋದ್ಧಾರ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||19||
ಭಕ್ತವತ್ಸಲ ಮುನಿಜನಪಾಲಕ ವೇದವ್ಯಾಸ ಪಾಹಿಮಾಂ| ವೇದವ್ಯಾಸ .....ರಕ್ಷಮಾಂ||20||